ಆಡಮ್‍ನ ಶಿಖರ
ಸಿಲೋನಿನಲ್ಲಿ ಕೊಲಂಬೊದಿಂದ 72 ಕಿ.ಮೀ. ಪೂರ್ವದಲ್ಲಿದೆ. (ಉ.ಅ. 60 55'-ಪೂ.ರೇ. 800 30') ಹಟ್ಟನ್ ಮತ್ತು ರತ್ತಪುರಿ ಮಾರ್ಗವಾಗಿ ತಲುಪಬಹುದು. ಸಮುದ್ರಮಟ್ಟದಿಂದ ಎತ್ತರ 72360' ಅಗಲ 74' ಉದ್ದ 24'. ಇಲ್ಲಿ 5' 4" ಉದ್ದ 2,6" ಅಗಲವಿರುವ ಪಾದಮುದ್ರೆ ಇದೆ. ಇದನ್ನು ಬೌದ್ಧರು, ಮುಸ್ಲಿಮರು, ಹಿಂದೂಗಳು ಕ್ರಮವಾಗಿ ಬುದ್ಧ, ಆಡಮ್, ಶಿವ-ಇವರ ಪಾದವೆಂದು ಪೂಜಿಸುತ್ತಾರೆ. ಬೌದ್ಧರ ವಶದಲ್ಲಿದ್ದು ಪವಿತ್ರ ಯಾತ್ರಸ್ಥಳವೆನಿಸಿದೆ.					
(ಪಿ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ